'ಬಿಗ್ ಬಾಸ್ 15' ಗೆದ್ದ ಸುಂದರಿ ತೇಜಸ್ವಿ ಪ್ರಕಾಶ್ ಹೇಳಿದ್ರು ಈ ಮಾತು! - ಬಿಗ್ ಬಾಸ್ ಟ್ರೋಫಿ ಗೆದ್ದ ತೇಜಸ್ವಿ
ಮುಂಬೈ(ಮಹಾರಾಷ್ಟ್ರ): ಕಿರುತೆರೆ ನಟಿ ತೇಜಸ್ವಿ ಪ್ರಕಾಶ್ ಬಿಗ್ ಬಾಸ್ 15ರ ವಿಜೇತೆಯಾಗಿ ಹೊರಹೊಮ್ಮಿದ್ದು, ಟ್ರೋಫಿ ಜೊತೆಗೆ 40 ಲಕ್ಷ ರೂ. ನಗದು ಬಹುಮಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಗೆದ್ದು ಈಗಾಗಲೇ ಮನೆಗೆ ತೆರಳಿರುವ ತೇಜಸ್ವಿ ಪ್ರಕಾಶ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ಫಾಲೋವರ್ಸ್ ಹಾಗೂ ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಇದರ ಬೆನ್ನಲ್ಲೇ ತನ್ನ ಗೆಲುವಿನಿಂದ ಅನೇಕರು ಹೊಟ್ಟೆಕಿಚ್ಚು ಪಟ್ಟಿದ್ದಾರೆ. ನಾನು ಬಿಗ್ಬಾಸ್ ಗೆದ್ದಿರುವುದು ಇತರರ ದೌರ್ಬಲ್ಯಗಳಿಂದಲ್ಲ, ಹೊರತಾಗಿ ನನ್ನಲ್ಲಿರುವ ಶಕ್ತಿಯಿಂದ ಹೋರಾಡಿ ಎಂದು ತಿರುಗೇಟು ನೀಡಿದ್ದಾರೆ.