ಅಮ್ಮನ ಹುಟ್ಟಿದ ಹಬ್ಬಕ್ಕೆ ಕನ್ನಡದಲ್ಲಿ ಶುಭ ಕೋರಿ ಸ್ವೀಟ್ ಗರ್ಲ್ ಎನಿಸಿಕೊಂಡ ಸ್ವೀಟಿ..! - ಮಾತೃಭಾಷೆ
ನಿನ್ನೆ ನಟಿ ಅನುಷ್ಕಾ ಶೆಟ್ಟಿ ಫೇಸ್ಬುಕ್ ನೋಡಿದ ಕನ್ನಡಿಗರಲ್ಲಿ ಏನೋ ಒಂದು ರೀತಿಯ ಸಂತೋಷ, ಹೆಮ್ಮೆಯ ಮನೋಭಾವ. ಏಕೆಂದರೆ ತನ್ನ ತಾಯಿಯ ಹುಟ್ಟಿದ ಹಬ್ಬಕ್ಕೆ ಅವರು ಕನ್ನಡದಲ್ಲಿ ಶುಭ ಕೋರಿದ್ದರು. ಕರ್ನಾಟಕದಿಂದ ಹೋಗಿ ತೆಲುಗು ನಾಡಿನಲ್ಲಿ ಹೆಸರು ಮಾಡಿರುವ ಅನುಷ್ಕಾ ಕೂಡಾ ಕನ್ನಡವನ್ನು ಮರೆತಿದ್ದಾರೆ ಅಂದುಕೊಂಡಿದ್ದ ಎಷ್ಟೋ ಅಭಿಮಾನಿಗಳಿಗೆ ಈ ಪೋಸ್ಟ್ ನೋಡಿ ಬಹಳ ಖುಷಿಯಾಗಿದೆ. ಇನ್ನು ಇದುವರೆಗೂ ಕನ್ನಡ ಸಿನಿಮಾಗಳಲ್ಲಿ ನಟಿಸದ ಅನುಷ್ಕಾ, ಒಳ್ಳೆಯ ಕಥೆ ಇದ್ದರೆ ಖಂಡಿತ ನನ್ನ ಮಾತೃಭಾಷೆಯಲ್ಲಿ ನಟಿಸುತ್ತೇನೆ ಎಂದು ಹೇಳಿದ್ದಾರೆ.