ಸಿದ್ಧಗಂಗೆಯ ತ್ರಿವಿಧ ದಾಸೋಹಿ ಸನ್ನಿಧಾನಕ್ಕೆ ಸು'ದೀಪ'.. ದೇವರ ಮುಂದೆ ಪೈಲ್ವಾನ್ ಧ್ಯಾನ!! - ಸಿದ್ದಗಂಗಾ ಮಠ
ನಾಳೆ ಹುಟ್ಟು ಹಬ್ಬದ ಹಿನ್ನೆಲೆ ಅಭಿನಯ ಚಕ್ರವರ್ತಿ ಸುದೀಪ್ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಗದ್ದುಗೆ ಕೆಳಗಿರುವ ಧ್ಯಾನ ಮಂದಿರದಲ್ಲಿ ಸುಮಾರು ಒಂದು ನಿಮಿಷಗಳ ಕಾಲ ಧ್ಯಾನ ಮಾಡಿದರು. ಚಿತ್ರ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕೂಡ ಜೊತೆಯಲ್ಲಿದ್ದರು.