ಶ್ರೀರಾಮ ನಾಮ ಜಪದಲ್ಲಿ ಸ್ಯಾಂಡಲ್ ವುಡ್ ಅಧ್ಯಕ್ಷ! - Srirama Navami celebration by sharan
ಇಂದು ಎಲ್ಲೆಡೆ ಶ್ರೀ ರಾಮ ನವಮಿ ಹಬ್ಬದ ಸಂಭ್ರಮ. ರಾಮ ನಾಮ ಜಪ ಮಾಡಿದರೆ ಸಾಕು ರಾಮ ನಮ್ಮನ್ನು ರಕ್ಷಿಸುತ್ತಾನೆ ಎಂಬ ಒಂದು ನಂಬಿಕೆ ಹೆಚ್ಚಿನವರಲ್ಲಿದೆ. ಈ ನಂಬಿಕೆಯಿಂದ ಕೋಟ್ಯಂತರ ಜನ ಇಂದು ಶ್ರೀ ರಾಮ ನವಮಿ ಹಬ್ಬವನ್ನು ಬಹಳ ಸಡಗರದಿಂದ ಆಚರಣೆ ಮಾಡ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಅಧ್ಯಕ್ಷ ಎಂದು ಕರೆಯಿಸಿಕೊಂಡಿರುವ ನಟ ಶರಣ್ ಕೂಡ ಶ್ರೀ ರಾಮನನ್ನು ಸ್ಮರಿಸಿಕೊಂಡಿದ್ದಾರೆ. ಸದ್ಯ ಗುರು ಶಿಷ್ಯರು ಸಿನಿಮಾ ಚಿತ್ರೀಕರಣದಲ್ಲಿರೋ ನಟ ಶರಣ್ ಹಚ್ಚ ಹಸಿರಿನಲ್ಲಿ ಶ್ರೀ ರಾಮನ ಬಗ್ಗೆ ಮಂತ್ರ ಜಪಿಸುತ್ತಾ ರಾಮನ ಜಪ ಮಾಡಿದ್ದಾರೆ. ಇನ್ನು ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ರಿಲೀಸ್ಗೆ ರೆಡಿ ಇದೆ. ಆದರೆ, ಕೊರೊನಾ ಹಾವಳಿಯಿಂದ ಈ ತಿಂಗಳು ಬಿಡುಗಡೆ ಆಗೋದಕ್ಕೆ ಸಜ್ಜಾಗಿದ್ದ ಶರಣ್ ಅವತಾರ ಪುರುಷ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ.