ಮೂರು ವರ್ಷಗಳ ಬಳಿಕ ನಟನೆಗೆ ವಾಪಸಾದ ಸಿಂಪಲ್ ಸುಂದರಿ - ಮೂರು ವರ್ಷಗಳ ಬಳಿಕ ನಟನೆಗೆ ಶ್ವೇತಾ ವಾಪಸ್
ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ, ಕಿರಗೂರಿನ ಗಯ್ಯಾಳಿಗಳು ಹಾಗೂ ಫೇರ್ ಅಂಡ್ ಲವ್ಲಿಯಂತಂಹ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್. ಕಿರಗೂರಿನ ಗಯ್ಯಾಳಿಗಳು ಸಿನಿಮಾ ನಂತರ ಹೆಣ್ಣು ಮಗುವಿನ ತಾಯಿಯಾದ ಕಾರಣ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ರು. ಈಗ ಶ್ವೇತಾ ಶ್ರೀವಾತ್ಸವ್ ಒಂದು ವಿಭಿನ್ನ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಯಾವುದು ಆ ಸಿನಿಮಾ, ಚಿತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಪಾತ್ರ ಏನು? ಕನ್ನಡ ಚಿತ್ರರಂಗವನ್ನು ಶ್ವೇತಾ ಮಿಸ್ ಮಾಡಿಕೊಂಡ್ರಾ? ಮಗಳ ಬಗ್ಗೆ ಶ್ವೇತಾ ಶ್ರೀವಾತ್ಸವ್ ಹೇಳಿದ್ದೇನು? ಅವರ ಕನಸಿನ ಪಾತ್ರ ಯಾವುದು ಹೀಗೆ ಎಲ್ಲವನ್ನೂ ಶ್ವೇತಾ ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.