ಕೊರೊನಾ ಎರಡನೇ ಅಲೆ ಬಗ್ಗೆ ಕೈ ಮುಗಿದು ಹ್ಯಾಟ್ರಿಕ್ ಹೀರೋ ಹೇಳಿದ್ದೇನು! - shivrajkumar latest video
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ಶುರುವಾಗ್ತಿದೆ. ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಮತ್ತೆ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ ಎಂಬ ಚರ್ಚೆಗಳು ನಡೆಯತ್ತಿದೆ. ಈ ಬಗ್ಗೆ ನಟ ಶಿವರಾಜ್ ಕುಮಾರ್ ಜನರಲ್ಲಿ ಹಾಗೂ ಅಭಿಮಾನಿಗಳಲ್ಲಿ ಕೈ ಮುಗಿದು ಒಂದು ಮನವಿ ಮಾಡಿದ್ದಾರೆ. ಕೊರೊನಾ ಎರಡನೇ ಅಲೆ ಶುರುವಾಗುತ್ತಿದೆ. ಮತ್ತೆ ಲಾಕ್ಡೌನ್ ಆಗೋದು ಬೇಡ, ದಯಮಾಡಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸೋಣ ಅಂತಾ ಶಿವರಾಜ್ ಕುಮಾರ್ ಕೈ ಮುಗಿದು ಕೇಳಿಕೊಂಡಿದ್ದಾರೆ. ಸದ್ಯ ಭಜರಂಗಿ 2 ಸಿನಿಮಾದ ಜಪ ಮಾಡುತ್ತಿರುವ ಶಿವರಾಜ್ ಕುಮಾರ್ ಈ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿರೋದು ಖುಷಿಯ ವಿಷಯ.