ಕವಚ ಚಿತ್ರಕ್ಕೆ ಭರ್ಜರಿ ಓಪನಿಂಗ್! - ಶಿವರಾಜ್ಕುಮಾರ್
ಇಂದು ತೆರೆ ಕಂಡಿರುವ ಕವಚ ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಬೆಂಗಳೂರಿನ ಸಂತೋಷ ಚಿತ್ರಮಂದಿರಕ್ಕೆ ಆಗಮಿಸಿದ್ದ ಶಿವರಾಜ್ಕುಮಾರ್ ಹಾಗೂ ಚಿತ್ರತಂಡ ಸಿನಿಮಾ ನೋಡಿ ಖುಷಿ ಪಟ್ಟಿದೆ. ತುಂಬಾ ದಿನಗಳ ನಂತ್ರ ವಿಭಿನ್ನವಾದ ಸಿನಿಮಾ ಮಾಡಿದ್ದೀನಿ ಅಂತಾ ಸ್ವತಃ ನಟ ಶಿವಣ್ಣ ಹೇಳಿಕೊಂಡ್ರು. ಶಿವಣ್ಣನ ಫ್ಯಾನ್ಸ್ ಚಿತ್ರಮಂದಿರದ ಬಳಿ ಉಚಿತ ನೇತ್ರ ತಪಾಸಣೆ ಹಾಗೂ ನೇತ್ರದಾನ ಶಿಬಿರ ಏರ್ಪಡಿಸಿದ್ದರು. ಇಂದು ಕವಚ ಚಿತ್ರದ ಅಬ್ಬರ ಹೇಗಿತ್ತು ಅನ್ನೋದು ಈ ವಿಡಿಯೋದಲ್ಲಿದೆ ನೋಡಿ...