ಶಿವರಾಂ ನಮ್ಮ ಜತೆ ಯಾವತ್ತೂ ಇರ್ತಾರೆ.. ಅವರ ಆತ್ಮಕ್ಕೆ ಶಾಂತಿ ಸಿಗಲಿ.. ನಟಿ ಭಾರತಿ ವಿಷ್ಣುವರ್ಧನ್ - Bharathi Vishnuvardhan statement
ಈ ಸಂದರ್ಭದಲ್ಲಿ ಏನ್ ಮಾತಾಡ್ಬೇಕಂತಾ ಗೊತ್ತಾಗ್ತಿಲ್ಲ. ಆ ಭಾವನೆಗಳಿಗೆ ಪದಗಳೇ ಇಲ್ಲ. ನಾನು ಅವರನ್ನ ನೋಡಿದ್ದು ಚೆನ್ನೈನಲ್ಲಿ. 55 ವರ್ಷದಿಂದ ಅವರು ನನಗೆ ಗೊತ್ತು. ಹಲವು ವಿಚಾರಗಳ ಬಗ್ಗೆ ಮಾತಾಡ್ತಿದ್ವಿ. ಶಿವರಾಂ ಅವರು ತಂದೆಯ ಸ್ಥಾನದಲ್ಲಿದ್ರು. ಮನೆಯಲ್ಲಿ ಏನೇ ಪೂಜೆ, ಪುನಸ್ಕಾರವಿದ್ರೂ ಅವರು ಇರಲೇಬೇಕು. ವಿಷ್ಣು ಅವರು ಕಾಲೇಜು ದಿನಗಳಿಂದಲೇ ಜತೆಯಲಿದ್ದವರು. ವಿಷ್ಣುವರ್ಧನ್ ಜತೆ ಸೇರಿ ಸ್ನೇಹಲೋಕ ಟೀಂ ಕಟ್ಟಿದ್ರು. ಇಂತಹ ವ್ಯಕ್ತಿ ಜತೆ ನಾವಿದ್ವಿ ಅನ್ನೋದೇ ಭಾಗ್ಯ. ಅವರು ನಮ್ಮ ಜತೆ ಯಾವತ್ತೂ ಇರ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಹೇಳಿದರು.