ಸಂಜನಾ ಮನೆ ಮೇಲೆ ಸಿಸಿಬಿ ದಾಳಿ ಹೇಗಾಯ್ತು...ಇಲ್ಲಿದೆ ಸಂಪೂರ್ಣ ವಿವರ - Sandalwood drug case
ಬೆಂಗಳೂರು: ಇಷ್ಟು ದಿನಗಳ ಕಾಲ ಸ್ವಲ್ಪ ಟೆನ್ಷನ್ ಫ್ರೀ ಆಗಿದ್ದ ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿಗೆ ಇಂದು ಬೆಳಗ್ಗೆ ಶಾಕ್ ಕಾದಿತ್ತು. ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಂಟು ಇದೆ ಎಂಬ ಮಾತು ಕೇಳಿ ಬರುತ್ತಿದ್ದಂತೆ ನಟಿ ಸಂಜನಾ ಹೆಸರು ಕೂಡಾ ಪ್ರಕರಣದಲ್ಲಿ ಕೇಳಿಬಂದಿತ್ತು. ಇದೀಗ ರಾಗಿಣಿ, ರಾಹುಲ್ ಹಾಗೂ ಇನ್ನಿತರರೊಂದಿಗೆ ಸಂಜನಾ ಕೂಡಾ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.