ಕಾಂಕ್ರೀಟ್ ನಾಡಿನಲ್ಲಿ ಸ್ಯಾಂಡಲ್ವುಡ್ ನಟಿಯ ಹಸಿರು ಕ್ರಾಂತಿ - Nivedita small garden
ಬೆಂಗಳೂರು: ಆಧುನಿಕತೆಯ ಹೊಡೆತಕ್ಕೆ ಸಿಲುಕಿ ಬೆಂಗಳೂರು ಕಾಂಕ್ರೀಟ್ ನಾಡು ಎನಿಸಿದೆ. ಈ ಸಿಲಿಕಾನ್ ಸಿಟಿಯಲ್ಲಿ ಹಸಿರು ಹುಡುಕಿದರೂ ನೋಡಲು ಸಿಗುವುದು ಕಷ್ಟ. ಅಲ್ಲಲ್ಲಿ ಕೆಲವೊಂದು ಉದ್ಯಾನವನಗಳು ಕಂಡುಬಂದರೂ ಹಸಿರು ಕಡಿಮೆ ಎಂದೇ ಹೇಳಬಹುದು. ಈ ನಡುವೆ ಸ್ಯಾಂಡಲ್ವುಡ್ ನಟಿಯೊಬ್ಬರು ತಮ್ಮ ಮನೆ ಬಳಿಯಲ್ಲೇ ಪುಟ್ಟ ಉದ್ಯಾನವನ, ತರಕಾರಿ, ಹಸಿರು ಸೊಪ್ಪಿನ ತೋಟವನ್ನು ಮಾಡಿ ಗಮನ ಸೆಳೆದಿದ್ದಾರೆ. ಅದು ಮತ್ತಾರೂ ಅಲ್ಲ, 'ಕಲ್ಲರಳಿ ಹೂವಾಗಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಿವೇದಿತಾ. ಸದ್ಯಕ್ಕೆ ಚಿತ್ರರಂಗದಿಂದ ದೂರ ಇರುವ ನಿವೇದಿತಾ ಹಸಿರು ವಾತಾವರಣದಲ್ಲಿ ಖುಷಿಯಾಗಿದ್ದಾರೆ. ನಿವೇದಿತಾ ಯಾವ ಯಾವ ತರಕಾರಿ ಬೆಳೆದಿದ್ದಾರೆ..? ಅವರ ಕೈ ತೋಟ ಹೇಗಿದೆ..? ಎಲ್ಲಾ ಮಾಹಿತಿ ಈ ವಿಡಿಯೋದಲ್ಲಿದೆ.