'ಜಲೀಲಾ'ನಿಲ್ಲದ ಮೊದಲ ಹುಟ್ಟುಹಬ್ಬಕ್ಕೆ ಹರಿದು ಬಂದ ಜನಸಾಗರ! - Ambarish
ದಿ.ರೆಬೆಲ್ಸ್ಟಾರ್ ಅಂಬರೀಶ್ ಅವರಿಗೆ ಇಂದು 67ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜಲೀಲಾ ಇಲ್ಲದ ಮೊದಲ ಹುಟ್ಟುಹಬ್ಬ ಇದಾಗಿದ್ದು, ಅವರ ಸಮಾಧಿಯತ್ತ ಬರುತ್ತಿರುವ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ಗುಬ್ಬಿ ತಾಲೂಕಿನ ಮರಾಠಿ ಪಾಳ್ಯದ ಸುಮಿತ್ರಾ ಬಾಯಿ ಎಂಬ ಅಭಿಮಾನಿ ಅಂಬಿ ಹುಟ್ಟು ಹಬ್ಬಕ್ಕಾಗಿ ವಿಶೇಷವಾದ ಹೂವಿನ ಹಾರವೊಂದನ್ನು ಮಾಡುಕೊಂಡು ಬಂದಿದ್ದು ಗಮನ ಸೆಳೆಯಿತು. ಅಂಬಿ ಸಮಾಧಿಯನ್ನು ಬಗೆ ಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಸಮಾಧಿ ಬಳಿ ಉಚಿತ ರಕ್ತದಾನ, ನೇತ್ರದಾನ ಶಿಬಿರ ಹಾಗೂ ಉಚಿತ ಅರೋಗ್ಯ ತಪಾಸಣೆ ಸಹ ಏರ್ಪಡಿಸಲಾಗಿದೆ.