ಬೆಂಗಳೂರಿನಲ್ಲಿ ರಜನಿ ಓದಿದ ಶಾಲೆ ಮುಂದೆ 'ತಲೈವಾ' ಬರ್ತ್ ಡೇ ಆಚರಣೆ - actor rajanikantha birthday
ಭಾರತೀಯ ಚಿತ್ರರಂಗ ಕಂಡ ಸೂಪರ್ ಸ್ಟಾರ್ ರಜನಿಕಾಂತ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 70ನೇ ವಸಂತಕ್ಕೆ ಕಾಲಿಟ್ಟಿರೋ ರಜನಿಕಾಂತ್ ಹುಟ್ಟುಹಬ್ಬದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಾಂತರ ಅಭಿಮಾನಿಗಳು, ತಲೈವಾ ಫೋಟೋ ಹಂಚಿಕೊಳ್ಳುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ತಲೈವಾ ಡಿಸೆಂಬರ್ 12, 1949ರಂದು ಬೆಂಗಳೂರಿನಲ್ಲಿ ಹುಟ್ಟಿದರು. ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದ ರಜನಿಕಾಂತ್ ಅವರ ನಿಜವಾದ ಹೆಸರು ಶಿವಾಜಿ ರಾವ್ ಗಾಯಕ್ವಾಡ್. 5ನೇ ವಯಸ್ಸಿನಲ್ಲಿ ರಜನಿ ಅವರ ತಾಯಿ ತೀರಿಕೊಂಡರು. ಅದಾದ ಬಳಿಕ ರಜನಿಕಾಂತ್ ಗವೀಪುರಂ ಪ್ರಾಥಮಿಕ ಶಿಕ್ಷಣ ಆಚಾರ್ಯ ಪಾಠ ಶಾಲೆಯಲ್ಲಿ ತಮ್ಮ ಬಾಲ್ಯದ ಶಿಕ್ಷಣ ಮುಗಿಸಿದರು. ಹೀಗಾಗಿ ಬೆಂಗಳೂರಿನ ರಜನಿಕಾಂತ್ ಸೇವಾ ಸಮತಿ ಅಭಿಮಾನಿಗಳ ಸಂಘ, ತಲೈವಾ ಓದಿದ ಗವೀಪುರಂ ಸ್ಕೂಲ್ ಮುಂದೆ ಕೇಕ್ ಕತ್ತರಿ ಜೈಕಾರ ಹಾಕುವ ಮೂಲಕ ಹುಟ್ಟುಹಬ್ಬ ಆಚರಿಸಿದೆ.
Last Updated : Dec 12, 2020, 5:08 PM IST