ಅಪ್ಪು ಒಂದು ಕಾರಣದಿಂದ ನಮ್ಮನ್ನು ಬಿಟ್ಟು ಹೋಗಿದ್ದಾನೆ: ರಾಘಣ್ಣ - ಪುನೀತ್ ರಾಜಕುಮಾರ್ ನಮನ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್
ಅಪ್ಪು ಯಾಕಿಷ್ಟು ಬೇಗ ಅನ್ನೋ ಪ್ರಶ್ನೆ ಕಾಡುತ್ತಿದೆ. ಆತನಿಗೆ ಎಲ್ಲವೂ ಅರ್ಜೆಂಟಾಗಿ ಬಂತು. ಚಿಕ್ಕ ವಯಸ್ಸಿನಲ್ಲೇ ನಟನೆ, ಗಾಯನ ಆರಂಭಿಸಿದ. 50 ವರ್ಷದಲ್ಲಿ ಮಾಡಬೇಕಾದ್ದನ್ನು 25 ವರ್ಷದಲ್ಲೇ ಮಾಡಿದ. ಮ್ಯಾರಾಥಾನ್ ಓಡುವ ಬದಲು 100 ಮೀಟರ್ ರೇಸ್ ಓಡಿದ ಎಂದು ಸಹೋದರ ಪುನೀತ್ ರಾಜ್‍ಕುಮಾರ್ ಅವರನ್ನು 'ಅಪ್ಪು ಅಮರ' ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್ ಸ್ಮರಿಸಿದರು.