'ಪಟಾಕಿ ಕಡಿಮೆ ಹೊಡೀರಿ, ಸಿಹಿತಿಂಡಿ ಹೆಚ್ಚು ತಿನ್ನಿ' ಬೆಳಕಿನ ಹಬ್ಬಕ್ಕೆ ದೊಡ್ಮನೆ 'ಯುವರತ್ನ' ಶುಭಾಶಯ - ದೀಪಾವಳಿ ಹಬ್ಬಕ್ಕೆ ಶುಭ ಕೋರಿದ ಪುನೀತ್ ರಾಜ್ ಕುಮಾರ್
ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಕರ್ನಾಟಕದ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಈ ದೀಪಾವಳಿ ನಿಮಗೆ ಸುಖ, ಸಂತೋಷ, ನೆಮ್ಮದಿ ತರಲಿ. ಹುಷಾರಾಗಿ ದೀಪಾವಳಿ ಆಚರಿಸಿ. ಆದಷ್ಟು ಕಡಿಮೆ ಪಟಾಕಿ ಹೊಡೆಯಿರಿ. ಹೆಚ್ಚು ಸಿಹಿತಿಂದು ಕುಟುಂಬದ ಜೊತೆ ಬೆಳಕಿನ ಹಬ್ಬವನ್ನು ಸೆಲೆಬ್ರೇಟ್ ಮಾಡಿ ಎಂದು ಅವರು ಹಾರೈಸಿದ್ರು.