ಎಸ್ಪಿಬಿ ಬಗ್ಗೆ ಅಚ್ಚರಿಯ ವಿಚಾರಗಳನ್ನ ಸ್ಮರಿಸಿದ ಅಪ್ಪು - ಪುನೀತ್ ರಾಜ್‍ಕುಮಾರ್
ಭಾರತೀಯ ಚಿತ್ರರಂಗದ ಮೇರು ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಇನ್ನು ನೆನಪು ಮಾತ್ರ. ಈ ಮಹಾನ್ ಗಾಯಕನ ನಿಧನಕ್ಕೆ ಭಾರತೀಯ ಚಿತ್ರರಂಗದ ನಟ, ನಟಿಯರು ಕಂಬನಿ ಮಿಡಿಯುತ್ತಿದ್ದಾರೆ. ಈಗ ನಟ ಪುನೀತ್ ರಾಜ್‍ಕುಮಾರ್ ಅವರು ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನಕ್ಕೆ ಕಂಬನಿ ಮಿಡಿಯುತ್ತಾ, ಕೆಲವೊಂದು ಅಚ್ಚರಿಯ ವಿಷಯಗಳನ್ನ ಹಂಚಿಕೊಂಡಿದ್ದಾರೆ. ನಾನು ಬಾಲ್ಯದಲ್ಲಿ ಇರುವಾಗ್ಲೇ ಎಸ್ ಪಿ ಬಾಲಸುಬ್ರಹ್ಮಣ್ಯಂನವರು ಬೆಟ್ಟದ ಹೂವು ಸಿನಿಮಾದಲ್ಲಿ ಹಾಡಿದ್ದಾರೆ. ಆ ಕ್ಷಣವನ್ನ ನಾನು ಜೀವನದಲ್ಲಿ ಮರೆಯೋದಕ್ಕೆ ಆಗೋಲ್ಲ. ಇನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ನಾನು ನಟಿಸಿದ ಸಿನಿಮಾಗಳಲ್ಲಿ ಹಾಡಿಲ್ಲ. ಆದರೆ ನಮ್ಮ ಬ್ಯಾನರ್ನ ಮಾಯಾಬಜಾರ್ ಸಿನಿಮಾದಲ್ಲಿ ಹಾಡಿರೋದು ನನ್ನ ಸೌಭಾಗ್ಯ ಅಂತಾ ಪುನೀತ್ ರಾಜ್‍ಕುಮಾರ್ ಎಸ್ಪಿಬಿ ಅವರನ್ನ ಸ್ಮರಿಸಿದರು.