ಚಾಮುಂಡಿ ಬೆಟ್ಟ ಹತ್ತಿದ ಪುನೀತ್... ಪವರ್ ಸ್ಟಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು - ಯುವರತ್ನ ಚಿತ್ರದ ಶೂಟಿಂಗ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರಿಗಾಲಿನಲ್ಲಿ ಮೆಟ್ಟಲುಗಳನ್ನು ಹತ್ತುವ ಮೂಲಕ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ. ಮೈಸೂರಿನಲ್ಲಿ 'ಯುವರತ್ನ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿರುವ ಪುನೀತ್ ರಾಜ್ ಕುಮಾರ್, ಚಿತ್ರಕರಣದಿಂದ ಬಿಡುವು ಮಾಡಿಕೊಂಡು ಬರಿಗಾಲಿನಲ್ಲೇ ಚಾಮುಂಡಿ ಬೆಟ್ಟ ಹತ್ತಿದ್ದಾರೆ. ತನ್ನ ಕೆಲ ಬೆಂಬಲಿಗರ ಜೊತೆ ಬೆಟ್ಟ ಹತ್ತಿದ ಪುನೀತ್ ರಾಜ್ ಕುಮಾರ್ ನೋಡಿದ ಅಭಿಮಾನಿಗಳು ಖುಷಿ ಪಟ್ಟರು. ಮೈಸೂರಿನಲ್ಲಿ ಚಿತ್ರೀಕರಣಕ್ಕಾಗಿ ವಾಸ್ತವ್ಯ ಹೂಡಿದರೆ, ಚಾಮುಂಡೇಶ್ವರಿ ದರ್ಶನ ಪಡೆಯಲು ಮೆಟ್ಟಿಲುಗಳ ಮೂಲಕ ಹೋಗುವ ಅಭ್ಯಾಸವನ್ನು ಪುನೀತ್ ರಾಜ್ ಕುಮಾರ್ ಇಟ್ಟುಕೊಂಡಿದ್ದಾರೆ.