ಕರ್ನಾಟಕ

karnataka

By

Published : Aug 26, 2019, 11:59 PM IST

ETV Bharat / videos

ಕೊಡಗಿಗೆ ಬಂದ್ಲು ಕಣ್ಣು ಹೊಡೆವ ಹುಡುಗಿ... ನಿಸರ್ಗಧಾಮದಲ್ಲಿ ಸುತ್ತಾಡಿದ ವಾರಿಯರ್

'ಒರು ಅಡಾರ್ ಲವ್​​​' ಚಿತ್ರದ ಹಾಡಿನಿಂದ ರಾತ್ರೋ ರಾತ್ರಿ ಫೇಮಸ್ ಆದ ಪ್ರಿಯಾ ವಾರಿಯರ್ ನಿಮಗೆಲ್ಲಾ ಗೊತ್ತು. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ನಿನ್ನೆ ಕೊಡಗಿಗೆ ಭೇಟಿ ನೀಡಿದ್ದಾರೆ. ತನ್ನ ಸ್ನೇಹಿತರೊಂದಿಗೆ ಕೊಡಗಿಗೆ ಭೇಟಿ ನೀಡಿದ್ದ ಪ್ರಿಯಾ ವಾರಿಯರ್ 'ವಿಸಿಟ್ ಟು ಸೇಫ್ ಅ್ಯಂಡ್​​​​ ಪೀಸ್ ಕೂರ್ಗ್' ಎಂದು ಕರೆ ನೀಡಿದ್ದಾರೆ. ಪ್ರವಾಹದಿಂದ ಕೊಡಗಿನ ಪ್ರವಾಸೋದ್ಯಮ ಕಳೆಗುಂದಿದ ಹಿನ್ನಲೆಯಲ್ಲಿ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಅವರಿಗೆ ಆಹ್ವಾನ ನೀಡಿತ್ತು. ಪ್ರಿಯಾ ವಾರಿಯರ್ ಅವರನ್ನು ನೋಡಿದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡರು. ಕೆಲವೊಂದು ಅಭಿಮಾನಿಗಳ ಒತ್ತಾಯದ ಮೇರೆಗೆ ಹುಬ್ಬು ಹಾರಿಸಿ, ಕಣ್ಸನ್ನೆ ಕೂಡಾ ಮಾಡಿದರು.

ABOUT THE AUTHOR

...view details