ಯುವರಾಜನ ಕಲ್ಯಾಣೋತ್ಸವಕ್ಕೆ ಭರ್ಜರಿಯಾಗಿ ರೆಡಿಯಾಗ್ತಿದೆ ದೊಡ್ಡ ಗೌಡರ ಕುಟುಂಬ - ನಿಖಿಲ್ ವಿವಾಹಕ್ಕೆ ಸಿದ್ಧತೆ
ದೊಡ್ಡಗೌಡರ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಜಾಗ್ವಾರ್ ಸ್ಟಾರ್ ಯುವರಾಜ ನಿಖಿಲ್ ಅದ್ಧೂರಿ ಕಲ್ಯಾಣಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ದೊಡ್ಡಗೌಡರ ಕುಟುಂಬದ ಹೆಣ್ಣು ನೋಡುವ ಶಾಸ್ತ್ರ ಮುಗಿಸಿ ಬಂದಿದ್ದರು. ಈಗ ವಧುವಿನ ಕಡೆಯವರು ದೊಡ್ಡಗೌಡರ ಮನೆಗೆ ಬಂದು ಮನೆ ನೋಡುವ ಶಾಸ್ತ್ರ ಮುಗಿಸಿದ್ದಾರೆ. ಇನ್ನು ನಿಖಿಲ್ ರೇವತಿ ಎಂಗೇಜ್ಮೆಂಟ್ ಫೆಬ್ರವರಿ ತಿಂಗಳಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಮದುವೆ ಬಗ್ಗೆ ಎರಡೂ ಕುಟುಂಬದವರು ಈಗಾಗಲೇ ಮಾತುಕತೆ ನಡೆಸುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್ಡಿಕೆ ತಿಳಿಸಿದ್ದಾರೆ.