ಪ್ರೇಮೋತ್ಸವ: ನೃತ್ಯದ ಮೂಲಕ ಮನರಂಜಿಸಲಿದ್ದಾರೆ ಶ್ವೇತಾ ಶ್ರೀವಾತ್ಸವ್, ಕಿಶನ್ ಬಿಳಗಲಿ - Actress Shweta Srivatsav
ಬೆಂಗಳೂರು: ಫೆ. 14 ರಂದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಪ್ರೇಮೋತ್ಸವ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿ, ನಟ ಕಿಶನ್ ಬಿಳಗಲಿ ಹೆಜ್ಜೆ ಹಾಕಲಿದ್ದಾರೆ. ಹಾಗೆಯೇ, ಶ್ವೇತಾ ಶ್ರೀವಾತ್ಸವ್ ಬೆಲ್ಲಿ ಡ್ಯಾನ್ಸ್ ಮೂಲಕ ಗಮನ ಸೆಳೆಯಲಿದ್ದಾರೆ. ಮೂರು ವರ್ಷಗಳ ನಂತರ ತಾವು ಡ್ಯಾನ್ಸ್ ಮಾಡಿದ್ದಾಗಿ ಶ್ವೇತಾ ಹೇಳಿಕೊಂಡಿದ್ದಾರೆ. ನಿರಂಜನ್ ದೇಶಪಾಂಡೆ ಹಾಗೂ ಶಾಲಿನಿ ಸತ್ಯನಾರಾಯಣ್ ನಿರೂಪಣೆ ಮಾಡಲಿದ್ದು, ನಟಿ ಅನುಪಮಾ ಗೌಡ ಅವರಿಗೆ ಸಾಥ್ ನೀಡಲಿದ್ದಾರೆ. ಕಿರುತೆರೆಯ ಸೆಲೆಬ್ರಿಟಿಗಳು ಕೂಡಾ ಇರಲಿರುವ ಈ ಕಾರ್ಯಕ್ರಮದಲ್ಲಿ ಕಿಶನ್ ಪಂಚತಂತ್ರ ಸಿನಿಮಾದ 'ಶೃಂಗಾರದ ಹೊಂಗೆ ಮರ' ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಕಿಶನ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ನೃತ್ಯದ ಚಿತ್ರಣದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.