ಎಸ್ಪಿಬಿ ವಿಶೇಷ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ - Famous singer SP Balasubrahmanyam
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಫಲಿಸಿದ್ದು ಗಾನ ಕೋಗಿಲೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಎಸ್ಪಿಬಿ ಪುತ್ರ ಚರಣ್ ಕೂಡಾ ಪ್ರತಿದಿನ ತಂದೆ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ. ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಕೂಡಾ ಮಾತನಾಡಿ ಊಹಾಪೋಹಗಳನ್ನು ನಂಬಬೇಡಿ. ಎಸ್ಪಿಬಿ ಗುಣಮುಖರಾಗಿ ಶೀಘ್ರದಲ್ಲೇ ವಾಪಸ್ ಬರುತ್ತಾರೆ ಎಂದು ಮನವಿ ಮಾಡಿದ್ದಾರೆ. ಅಲ್ಲದೆ, ಎಸ್ಪಿಬಿ ಅವರೊಂದಿಗಿನ ಒಡನಾಟ, ಎಸ್ಪಿಬಿ ಅವರ ವ್ಯಕ್ತಿತ್ವ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಪ್ರವೀಣ್ ಗೋಡ್ಖಿಂಡಿ ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.