ಗೆಳೆಯನ ನೆನೆದು ಕಣ್ಣೀರು ಹಾಕಿದ ಪ್ರಜ್ವಲ್, ಅಭಿ, ಪ್ರಣವ್ ದೇವರಾಜ್ - ಚಿರಂಜೀವಿಗೆ ಸರ್ಜಾ ಸಾವಿಗೆ ಅಭಿಷೇಕ್ ಸಂತಾಪ
ಗೆಳೆಯ ಚಿರು ನೆನೆದು ನಟ ಪ್ರಜ್ವಲ್ ದೇವರಾಜ್ ಕಣ್ಣೀರು ಹಾಕಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತ ಚಿರಂಜೀವಿ ಸರ್ಜಾ ಜೊತೆಗಿನ ಒಡನಾಟ ಮೆಲುಕು ಹಾಕಿದ ಪ್ರಜ್ವಲ್ , ನಾನು ಚಿರು ಚಿಕ್ಕ ವಯಸ್ಸಿನಿಂದ ಡ್ಯಾನ್ ಕ್ಲಾಸ್ ಗೆ ಹೋಗ್ತಿದ್ದೆವು. ತುಂಬಾ ಮೃದು ಸ್ವಭಾವದ ಚಿರು ಫಿಟ್ ಆಗಿದ್ದ, ಅಲ್ಲದೇ ನಾನು ಚಿರು ನೋಡಿ ವರ್ಕ್ ಔಟ್ ಮಾಡಲು ಶುರು ಮಾಡಿದ್ದೆ. ನನಗೆ ಸಾಫ್ಟ್ ಆಗಿರಬೇಡ ಎಂದು ಯಾವಾಗಲು ಬುದ್ದಿ ಹೇಳ್ತಿದ್ದ ಎಂದು ಪ್ರಜ್ವಲ್ ಭಾವುಕರಾಗಿ ಕಣ್ಣೀರು ಹಾಕಿದ್ರು. ಪ್ರಜ್ವಲ್ ಪತ್ನಿ ರಾಗಿಣಿ ಕೂಡ ಕಣ್ಣೀರು ಹಾಕಿದ್ರು. ಇದೇ ವೇಳೆ ಮಾತನಾಡಿದ ಅಭಿಷೇಕ್ ಅಂಬರೀಶ್ , ಕಳೆದ 24 ಗಂಟೆಯಿಂದ ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ. ಒಟ್ಟಿಗೆ ಬೆಳೆದಿದ್ವಿ.ಒಟ್ಟಿಗೆ ಊಟ ಮಾಡಿದ್ವಿ, ತುಂಬಾ ದುಃಖ ಆಗ್ತಿದೆ ಅಂತ ಭಾವುಕರಾದ್ರು. ಇಷ್ಟು ಚಿಕ್ಕವಯಸ್ಸಿನಲ್ಲಿ ಹೀಗಾಗ ಬಾರದಿತ್ತು. ಅವರ ಕುಟುಂಬದ ಜೊತೆ ಸದಾ ಇರ್ತೀನಿ ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಆ ದೇವರು ನೀಡಲಿ ಎಂದು ಅಭಿ ಹೇಳಿದ್ರು. ಪ್ರಣಮ್ ದೇವರಾಜ್ ಕೂಡ ಚಿರು ನನ್ನ ಅಣ್ಣ ನಂತಿದ್ರು. ಒಬ್ಬ ಅಣ್ಣನನ್ನ ಇಂದು ಕಳೆದು ಕೊಂಡಿದ್ದೀವಿ.ನಾನು 8 ನೇ ವಯಸ್ಸಿನಿಂದಲೂ ಅವರ ಜೊತೆ ಡ್ಯಾನ್ಸ್ ಕ್ಲಾಸ್ ಗೆ ಹೋಗ್ತಿದ್ದೆ, ಒಂದೇ ಕುಟುಂಬದವರ ರೀತಿ ಇದ್ದೆವು ಎಂದು ಪ್ರಣವ್ ಭಾವುಕರಾದರು.