ಧೂಳೆಬ್ಬಿಸಿದ ನೋರಾ ಫತೇಹಿ ಇನ್ಸ್ಟಾಗ್ರಾಂ ಫೋಟೋ! - ಡ್ಯಾನ್ಸರ್ ನೋರಾ ಫತೇಹಿ
ಬಾಲಿವುಡ್ ನಟಿ, ಡ್ಯಾನ್ಸರ್ ನೋರಾ ಫತೇಹಿ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಫೋಟೋವೊಂದು ಬಿರುಗಾಳಿ ಎಬ್ಬಿಸಿದ್ದು, ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಸಿನಿಮಾವೊಂದಕ್ಕಾಗಿ ಫ್ಲೋರ್ ಡ್ಯಾನ್ಸ್ ಮಾಡ್ತಿರುವ ಫೋಟೋ ಇದಾಗಿದ್ದು, ಯಾವುದೇ ಕಾರಣಕ್ಕೂ ಈ ಸಾಹಸಕ್ಕೆ ನೀವೂ ಕೈ ಹಾಕುತ್ತೀರಿ ಎಂದು ನಾನು ಯೋಚಿಸುವುದಿಲ್ಲ ಎಂದು ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ. ನೋರಾ ಫತೇಹಿ ಕಳೆದ ಕೆಲ ವಾರಗಳ ಹಿಂದೆ ಅಪ್ಲೋಡ್ ಮಾಡಿದ್ದ ದಿಲ್ಬರ್ ವಿಡಿಯೋ ಡ್ಯಾನ್ಸ್ಗೆ 1 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದ್ದು, ಈ ಹಿಂದಿನ ದಾಖಲೆ ಧೂಳಿಪಟವಾಗಿದ್ದವು.