ನಿಮಗಾಗಿ ಅಲ್ಲದಿದ್ರೂ ನಿಮ್ಮವರಿಗಾಗಿ ಮನೆಯಲ್ಲಿರಿ.... ದೀಪ ಬೆಳಗಿಸಿ: ಸ್ಯಾಂಡಲ್ವುಡ್ ನಟಿಯರ ಮನವಿ
ನಿಮಗಾಗಿ ಅಲ್ಲದಿದ್ರು ನಿಮ್ಮ ಮನೆಯವರಿಗಾಗಿ ಎಲ್ಲರೂ ಮನೆಯಲ್ಲೇ ಇರಿ ಎಂದು ಲವ್ ಮಾಕ್ಟೈಲ್ ಬೆಡಗಿ ಮಿಲನ ನಾಗರಾಜ್ ಜನರಲ್ಲಿ ಮನವಿ ಮಾಡಿದ್ದಾರೆ. ನಮಗೋಸ್ಕರ ನಮ್ಮ ದೇಶದ ವೈದ್ಯರು,ಪೊಲೀಸರು ಅವರ ಪ್ರಾಣವನ್ನು ರಿಸ್ಕ್ ನಲ್ಲಿಟ್ಟು ನಮಗಾಗಿ ಕೆಲಸ ಮಾಡ್ತಿದ್ದಾರೆ. ಆದ್ದರಿಂದ ಸರ್ಕಾರದ ಅದೇಶದಂತೆ ಮನೆಯಲ್ಲಿ ಇರುವುದು ಹಾಗೂ ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದಷ್ಟೆ ನಮ್ಮ ಜವಾಬ್ದಾರಿ , ಸ್ಟೇ ಹೋಂ ಸ್ಟೇ ಸೇಫ್ ಎಂದು ಜನರಿಗೆ ಮನವಿ ಮಾಡಿದ್ದಾರೆ. ಕಿಲ್ಲರ್ ಕೊರೋನಾ ವೈರಸ್ ಎಂಬ ಅಂಧಕಾರವನ್ನು ಹೊಡೆದೋಡಿಸಲು ಏಪ್ರಿಲ್ 5 ರಾತ್ರಿ 9ಗಂಟೆಗೆ ಮನೆಗಳಲ್ಲಿ ವಿದ್ಯುತ್ ದೀಪ ಆರಿಸಿ, ಮೊಂಬತ್ತಿ ಹಚ್ಚುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ಕೊಟ್ಟಿದ್ದಾರೆ. ಈ ಕರೆಗೆ ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕೈ ಜೋಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವಂತೆ ನಾಳೆ ರಾತ್ರಿ 9 ಗಂಟೆಗೆ ಲೈಟ್ಸ್ ಆಫ್ ಮಾಡ ದೀಪಗಳನ್ನು ಹಚ್ಚೋಣ ಎಲ್ಲರೂ ಬೇಗ ಗುಣಮುಖ ಆಗಲಿ ಎಂದು ಪ್ರಾರ್ಥಿಸೋಣ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.