ಸೆಲ್ಫಿಗಾಗಿ ಮಾಸ್ಕ್ ಕೆಳಗಿಳಿಸಿದ ಅಭಿಮಾನಿಗೆ ಸಾರಾ ಅಲಿ ಖಾನ್ ಮಾಡಿದ್ದೇನು? - sara ali khan scolds fan
ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ ತಮ್ಮ ರಜಾದಿನಗಳನ್ನು ಎಂಜಾಯ್ ಮಾಡಿ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು. ಈ ವೇಳೆ ನಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಅಭಿಮಾನಿಯೊಬ್ಬ ಮುಖದಿಂದ ಮಾಸ್ಕ್ ಕೆಳಗಿಳಿಸಿದ್ದಾನೆ. ಇದನ್ನು ಗಮನಿಸಿದ ಸಾರಾ, ‘ನೀವೇನು ಮಾಡುತ್ತಿದ್ದೀರಿ. ಸಮಯ ತುಂಬಾ ಕಠಿಣವಾಗಿದೆ. ಹೀಗೆ ಮಾಡಬಾರದು’ ಎಂದು ಬುದ್ದಿ ಹೇಳಿದರು. ಬಳಿಕ ಆತನಿಗೆ ತನ್ನ ತಪ್ಪಿನ ಅರಿವಾಗಿ ಮಾಸ್ಕ್ ಅನ್ನು ಸರಿಯಾಗಿ ಧರಿಸಿಕೊಂಡಿದ್ದಾನೆ. ಸಾರಾ ಸಾಮಾಜಿಕ ಜವಾಬ್ದಾರಿ ಮೆಚ್ಚುಗೆ ಗಳಿಸಿದೆ.