ದುಬೈ ಕನ್ನಡಿಗರಿಂದ ಸುದೀಪ್ಗೆ ಅದ್ಧೂರಿ ಸ್ವಾಗತ - sudeep videos
ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾದ ಟೈಟಲ್ ವಿಕ್ರಾಂತ್ ರೋಣ ಎಂದು ಬದಲಾಗಿರುವುದು ಎಲ್ಲರಿಗೂ ಗೊತ್ತಿದೆ. ಈ ಟೈಟಲ್ ಲಾಂಚ್ ಕಾರ್ಯಕ್ರಮವನ್ನು ಇದೇ 31ರಂದು ದುಬೈನ ಬುರ್ಜ್ ಖಲೀಫಾ ಮೇಲೆ ಮಾಡಲಾಗುತ್ತದೆ ಎಂದು ಚಿತ್ರತಂಡ ಘೋಷಿಸಿದೆ. ಈ ಹಿನ್ನೆಲೆ ಸುದೀಪ್ ದುಬೈಗೆ ಭೇಟಿ ಕೊಟ್ಟಿದ್ದಾರೆ. ಸುದೀಪ್ ದುಬೈಗೆ ಹೋಗುತ್ತಿದ್ದಂತೆ ಗ್ರ್ಯಾಂಡ್ ಆಗಿ ಸ್ವಾಗತಿಸಲಾಗಿದೆ. ಹೂವಿನ ಮಾಲೆ ಹಾಕುವ ಮೂಲಕ ಸುದೀಪ್ರನ್ನು ವೆಲ್ಕಮ್ ಮಾಡಲಾಗಿದೆ. ಇನ್ನು, ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಹಾಗೂ ಮಗಳು ಸಾನ್ವಿಗೆ ಅಲ್ಲಿನ ಕನ್ನಡಿಗರು ಆರತಿ ಮಾಡುವ ಮೂಲಕ ಸ್ವಾಗತಿಸಿದ್ದಾರೆ.