ಕರ್ನಾಟಕ

karnataka

ETV Bharat / videos

ಸಂಗೀತ ಕುಲುಮೆಯೊಳು ಸ್ವರ ಹೊಮ್ಮಿಸುವ ರವಿಬಸ್ರೂರು.. ಕುಲ ಕಸುಬಿನಲ್ಲೂ ಸಿದ್ಧಹಸ್ತರು! - kgf film music director working in iron furnace

By

Published : Mar 29, 2020, 5:38 PM IST

ಕೊರೊನಾ ವೈರಸ್ ಕಂಟ್ರೋಲ್ ತರುವ ನಿಟ್ಟಿನಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಅದೇ ರೀತಿ ಕೆಲ ಚಿತ್ರರಂಗವೂ ಸ್ತಬ್ಧವಾಗಿದೆ. ಸ್ವಂತ ಊರಿನತ್ತ ಪಯಣ ಬೆಳೆಸಿರೋ ಸಂಗೀತ ನಿರ್ದೇಶಕ ರವಿ ಬಸ್ರೂರು, ಸಂಗೀತ ಸ್ವರ ಕಟ್ಟುವ ಕೆಲಸಕ್ಕೆ ತಾತ್ಕಾಲಿಕ ವಿಶ್ರಾಂತಿ ನೀಡಿ ಕುಲ ಕಸುಬಿಗೆ ಮೊರೆ ಹೋಗಿದ್ದಾರೆ. ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಮನೆಯಲ್ಲಿ ಕುಲುಮೆ ಕೆಲಸ ಮಾಡಿ ಸೈ ಎನಿಸಿಕೊಳ್ತಿದ್ದಾರೆ. 'ಇವತ್ 35 ರೂಪಾಯ್ ದುಡಿಮೆ.. ತಲಿಬಿಸಿ ಫುಲ್ ಕಮ್ಮಿಆಯ್ತ್, ಅಪ್ಪಯ್ಯಂಗೆ ಜೈ.. ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ. ಅದೇ ವಿಡಿಯೋವೀಗ ವೈರಲಾಗಿದೆ.

ABOUT THE AUTHOR

...view details