ಕೇಂದ್ರ ಬಜೆಟ್ ಬಗ್ಗೆ ಶಿವಣ್ಣ ಏನಂದ್ರು? - undefined
ಬೆಂಗಳೂರು: ಇಂದು ಮಂಡನೆಯಾಗಿರುವ ಕೇಂದ್ರ ಬಜೆಟ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿದ್ದಾರೆ. ಇಂದಿರಾಗಾಂಧಿ ನಂತರ ಮಹಿಳಾ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಮನೆಯಲ್ಲಿ ಹೆಣ್ಣು ಮಕ್ಕಳು ಬಜೆಟ್ ನಿಭಾಯಿಸುತ್ತಿರುತ್ತಾರೆ. ಅಪ್ಪಾಜಿ ಇದ್ದಾಗ ನಮ್ಮ ತಾಯಿ ಬಜೆಟ್ ನೋಡಿಕೊಳ್ಳುತ್ತಿದ್ರು. ಈಗ ನನ್ನ ಪತ್ನಿ ಗೀತಾ ನೋಡಿಕೊಳ್ತಾರೆ. ಓರ್ವ ಹೆಣ್ಣುಮಗಳು ಬಜೆಟ್ ಮಾಡಿದ್ರೆ ಸರಿಯಾಗಿರುತ್ತೆ ಅನ್ನೋ ನಂಬಿಕೆ ಇದೆ. ಅವರಿಗೆ ದೇಶದ ಬಗ್ಗೆ ಎಲ್ಲ ಗೊತ್ತಿರುತ್ತೆ. ಆದ್ದರಿಂದ ನಿರ್ಮಲಾ ಅವರದು ಉತ್ತಮವಾದ ಬಜೆಟ್ ಎಂದಿದ್ದಾರೆ.