ಹೋಳಿ ಹಬ್ಬಕ್ಕೆ ಶುಭ ಕೋರಿದ 'ತಲೈವಿ': ವಿಡಿಯೋ - 'ತಲೈವಿ' ಸಿನಿಮಾ
ಹೋಳಿ ಹಬ್ಬ ಎಂದರೆ ಸಂತಸ. ಎಲ್ಲರೂ ಬಣ್ಣದ ಓಕುಳಿಯಲ್ಲಿ ಮಿಂದು ನಲಿಯುತ್ತಾರೆ. ಕೆಲ ಬಾಲಿವುಡ್ನ ನಟ ನಟಿಯರು ಸಹ ಅದ್ಧೂರಿಯಾಗಿ ಹೋಳಿ ಆಚರಿಸಿದ್ದಾರೆ. ಇದೀಗ ನಟಿ ಕಂಗನಾ ರಣಾವತ್ ಅವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಅವರ ಮುಂಬರುವ ಚಿತ್ರ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನ ಆಧಾರಿತ 'ತಲೈವಿ' ಸಿನಿಮಾದ ಪ್ರಚಾರವನ್ನು ಮುಂದುವರೆಸಿದ್ದಾರೆ.