ವಿವಾದದ ನಡುವೆಯೂ ಕಂಗನಾ ಮಿಂಚಿಂಗ್.. ಮುಂಬರುವ ಚಿತ್ರಕ್ಕಾಗಿ ನಟಿಯ ರ್‍ಯಾಂಪ್ ವಾಕ್ - ಕಂಗನಾ ರಣಾವತ್ ರ್‍ಯಾಂಪ್ ವಾಕ್
2014ರಲ್ಲಿ ದೇಶಕ್ಕೆ ನಿಜವಾದ ಸ್ವಾತಂತ್ರ್ಯ(comments on India's freedom) ಸಿಕ್ಕಿದ್ದು, 1947ರಲ್ಲಿ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಬಾಲಿವುಡ್ ನಟಿ ಕಂಗನಾ(Kangana Ranaut) ತಮ್ಮ ಮುಂಬರುವ ಚಿತ್ರಕ್ಕಾಗಿ ರ್‍ಯಾಂಪ್ ವಾಕ್ ಮಾಡಿದ್ದಾರೆ. ಮುಂದಿನ ಚಿತ್ರ 'ತೇಜಸ್'ಗೋಸ್ಕರ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ನಟಿ ಸಖತ್ ಆಗಿ ಮಿಂಚಿದ್ದಾರೆ. ಗೋಲ್ಡನ್ ಸೀಕ್ವಿನ್ ಉಡುಪಿನಲ್ಲಿ ಮಿಂಚಿರುವ ಕಂಗನಾ ಎಲ್ಲರ ನಿದ್ದೆ ಕದ್ದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿರುವ ಬಾಲಿವುಡ್ ನಟಿ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.