ನನ್ನ ಮಗ ದರ್ಶನ್ ಇರೋ ತನಕ ನಾನು ಗೆಲ್ತಾನೆ ಇರ್ತೀನಿ: ಸುಮಲತಾ ಅಂಬರೀಶ್ - Launching of India vs England movie
ಬೆಂಗಳೂರು: ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಭಿನಯದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರದ ಲಾಂಚಿಂಗ್ ಕಾರ್ಯಕ್ರಮ ಇಂದು ನಗರದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸುಮಲತಾ, ನನ್ನ ಮಗ ದರ್ಶನ್ ನನ್ನ ಜೊತೆ ಇರೋ ತನಕ ನಾನು ಗೆಲ್ತಾನೆ ಇರ್ತೀನಿ ಎಂದು ಹೇಳಿಕೊಂಡರು. ಇದೇ ವೇಳೆ ಚಾಲೆಂಚಿಂಗ್ ಸ್ಟಾರ್ ದರ್ಶನ್ ಕೂಡ ಮಾತನಾಡಿ, ಮಕ್ಕಳು ಎಷ್ಟು ದೊಡ್ಡವರಾದರೂ ಇನ್ನು ಇಷ್ಟು ಗ್ಲಾಮರಸ್ ಆಗಿ ಕಾಣ್ತೀರಲ್ಲಾ ಎಂದು ಅಮ್ಮನನ್ನ ಕಿಚಾಯಿಸಿದರು.