ನಾದ ನ್ಯಾಯಾಲಯದ ಓರ್ವ ನ್ಯಾಯಾಧೀಶ ಎಸ್‌ಪಿಬಿ.. ಯೂನಿವರರ್ಸಲ್ ಗಾಯಕ ಎಂದ 'ಹಂಸ' - ಎಸ್‌ಪಿಬಿ
ಎಸ್ ಪಿ ಬಾಲಸುಬ್ರಹ್ಮಣ್ಯಂ ಎಂಬ ಸರಸ್ವತಿ ಪುತ್ರನ ಅಗಲಿಕೆಗೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. ಸ್ಯಾಂಡಲ್‌ವುಡ್‌ನ ನಾದಬ್ರಹ್ಮ ಹಂಸಲೇಖ ಜತೆಗೂ ಎಸ್‌ಪಿಬಿ ಸಂಬಂಧ ಅವಿನಾಭಾವ. ಸಂಗೀತ ಲೋಕದ ಭಾವನಾತ್ಮಕೆಯ ಜಗತ್ತಿನ ದೊಡ್ಡ ಯಜಮಾನರು ಎಸ್‌ಪಿಬಿ ಅವರು, ಇವತ್ತು ಬಾಲಸುಬ್ರಹ್ಮಣ್ಯಂ ನಮ್ಮನೆಲ್ಲ ಬಿಟ್ಟು ಹೋಗಿದ್ದಾರೆ ಅಂತಾ ಹೇಳೋದಿಕ್ಕೆ ಸಾಧ್ಯವಾಗುತ್ತಿಲ್ಲ. ದಿಕ್ಕು ತೋಚದೆ ಏನು ಮಾತನಾಡಲಿ ಅಂತಾ ಒದ್ದಾಡುತ್ತಿದ್ದೇನೆ ಎಂದು ಹಂಸಲೇಖ ಕಂಬನಿ ಮಿಡಿದಿದ್ದಾರೆ. ಅಷ್ಟೇ ಅಲ್ಲ, ಎಸ್‌ಪಿಬಿ ಓರ್ವ ಯೂನಿವರ್ಸಲ್ ಗಾಯಕ. ಇಂಥ ಮೇರು ಪ್ರತಿಭೆ ವಿಶ್ವದ ಯಾವುದೇ ಉದ್ಯಮದಲ್ಲೂ ಸಿಕ್ಕಲ್ಲ ಅಂತಾ ಬಣ್ಣಿಸಿದ್ದಾರೆ.
Last Updated : Sep 25, 2020, 9:53 PM IST