ದಯವಿಟ್ಟು ಮನೆಯಿಂದ ಹೊರ ಬರಬೇಡಿ,ಸರ್ಕಾರದ ನಿಯಮ ಪಾಲಿಸಿ: ದುನಿಯಾ ವಿಜಯ್ - ಕೊರೊನಾ ವೈರಸ್
ಬೆಂಗಳೂರು: ಕೊರೊನಾ ಮಹಾಮಾರಿ ತಡೆಯಲು ನಾವೆಲ್ಲರೂ ಪಣ ತೊಡಬೇಕು. ಜವಾಬ್ದಾರಿಯಿಂದ ಸರ್ಕಾರದ ಆದೇಶ ಪಾಲಿಸಬೇಕಾಗಿದೆ ಎಂದು ನಟ ನಟ ದುನಿಯಾ ವಿಜಯ್ ಹೇಳಿದ್ದಾರೆ. ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿರುವ ವಿಜಿ,ಸದ್ಯ ಕೊರೊನಾ ಮೂರನೇ ಸ್ಟೇಜ್ ತಲುಪಿದೆ. ಇನ್ನು ನಾವು ಸಾವುಗಳನ್ನ ತಡಯೋದು ತುಂಬಾ ಕಷ್ಟವಾಗಿದೆ. ಅಗತ್ಯ ವಸ್ತುಗಳಿಗಾಗಿ ಮಾತ್ರ ಮನೆಯಿಂದ ಹೊರ ಹೋಗಿ ಜವಾಬ್ದಾರಿಯಿಂದ ವರ್ತಿಸಬೇಕಿದೆ. ದಯವಿಟ್ಟು ಯಾರೂ ಮನೆಯಿಂದ ಹೊರ ಬರಬೇಡಿ ಎಂದು ನಟ ದುನಿಯಾ ವಿಜಯ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.