'ರಾಜ್ಕುಮಾರ್ ಜೊತೆ ಕಿಂಗ್ ಲಿಯರ್ ಚಿತ್ರ ಮಾಡುವ ಆಸೆ ನನಗಿತ್ತು' - ನಿರ್ದೇಶದ ಗಿರೀಶ್ ಕಾಸರವಳ್ಳಿ
ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ತನ್ನದೇ ಛಾಪು ಮೂಡಿಸಿದ ನಿರ್ದೇಶಕ ಗಿರೀಶ್ ಕಾಸರವಳ್ಳಿ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಲವತ್ತು ವರ್ಷಗಳನ್ನ ಪೂರೈಯಿಸಿರುವ ಗಿರೀಶ್ ಕಾಸರವಳ್ಳಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 70ನೇ ವಸಂತಕ್ಕೆ ಕಾಲಿಟ್ಟಿರುವ ಗಿರೀಶ್ ಕಾಸರವಳ್ಳಿ ಅವರ ಹುಟ್ಟುಹಬ್ಬವನ್ನ ’’ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’’ ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಆಚರಿಸಿತು. ತಮ್ಮ ಸಿನಿ ಜರ್ನಿ ಸೇರಿದಂತೆ ಕನ್ನಡ ಚಿತ್ರ ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಒಂದಷ್ಟು ಮಾತುಕತೆ ನಡೆಸಿದ್ದಾರೆ