ಕರ್ನಾಟಕ

karnataka

ETV Bharat / videos

ರಾಕಿ ಭಾಯ್ ಹುಟ್ಟುಹಬ್ಬದಂದು ಅಭಿಮಾನಿ ಕೊಟ್ರು ಬಿಗ್​ ಸರ್​​ಪ್ರೈಸ್​​! - Fan's give Surprise to Rocking star Yash

By

Published : Jan 8, 2020, 11:40 PM IST

ಭಾರತೀಯ ಚಿತ್ರರಂಗದಲ್ಲಿ ರಾಕಿ ಭಾಯ್ ಹವಾ ಜೋರಾಗಿದೆ. ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ 'ರಾಜಾಹುಲಿ' ಅಂದ್ರೆ ಅಭಿಮಾನಿ‌ಗಳಿಗೆ ಇನ್ನಿಲ್ಲದ ಖುಷಿ. ಇದಕ್ಕೆ ಸಾಕ್ಷಿ ಎಂಬಂತೆ ಮೈಸೂರಿನಿಂದ ಬಂದಿದ್ದ ಯಶ್ ಅಭಿಮಾನಿವೋರ್ವರು ಕೊಟ್ಟಿರುವ ವಿಶೇಷ ಉಡುಗೊರೆ. ಹೌದು, ಯಶ್ ಹುಟ್ಟುಹಬ್ಬದ ಹಿನ್ನೆಲೆ ವಿಶೇಷ ಅಲ್ಬಂ ತಯಾರಿಸಿ ಸರ್​ಪ್ರೈಸ್​​ ನೀಡಿದ್ದಾರೆ ಮೈಸೂರಿನ ಪ್ರದೀಪ್. ಯಶ್ ಕಿರುತರೆ ಜರ್ನಿಯಿಂದ ಹಿಡಿದು ಈಗಿನ ಕೆಜಿಎಫ್ 2 ಚಿತ್ರದವರೆಗೂ ನಟಿಸಿದ ಎಲ್ಲಾ ಚಿತ್ರಗಳ ಪೋಸ್ಟರ್ ಹಾಗೂ ಪೇಪರ್ ಕಟಿಂಗ್ಸ್ ಅನ್ನು ಸಂಗ್ರಹಿಸಿದ್ದಾರೆ. 700 ಪುಟಗಳಿಗೂ ಹೆಚ್ಚು ಇರುವ ಮೂರು ಆಲ್ಬಂಗಳನ್ನು ಮಾಡಿ, ರಾಜಾಹುಲಿ ಹುಟ್ಟುಹಬ್ಬದಂದೇ ಉಡುಗೊರೆ ನೀಡಿದ್ರು. ಇದನ್ನು ನೋಡಿದ ಯಶ್​ಗೆ ಅಚ್ಚರಿ ಜೊತೆ ಖುಷಿಯೂ ಆಗಿದೆ.

ABOUT THE AUTHOR

...view details