ಪಾರ್ವತಮ್ಮ ರಾಜ್‍ಕುಮಾರ್ ಪುಣ್ಯಸ್ಮರಣೆ: ಸಮಾಧಿಗೆ ರಾಜ್ ಕುಟುಂಬ ಪೂಜೆ - undefined
2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿನ ಪಾರ್ವತಮ್ಮ ರಾಜಕುಮಾರ್ ಸಮಾಧಿಗೆ ರಾಜ್ ಕುಟುಂಬ ಸದಸ್ಯರು ಪೂಜೆ ಸಲ್ಲಿಸಿದರು. ರಾಘವೇಂದ್ರ ರಾಜ್ ಕುಮಾರ್ ಹಾಗೂ ಅವರ ಪತ್ನಿ ಮಂಗಳಾ, ಪುನೀತ್ ಪತ್ನಿ ಅಶ್ವಿನಿ, ಶಿವಣ್ಣನ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ನವದಂಪತಿಗಳಾದ ಯುವರಾಜ್ ಹಾಗೂ ಶ್ರೀದೇವಿ ಸಮಾಧಿಗೆ ನಮಿಸಿದರು. ಇದೇ ವೇಳೆ ಬಿಡದಿಯ ಶಿವಸಾಗರ್ ಹೊಟೇಲ್ ವತಿಯಿಂದ ಸಮಾಧಿ ಬಳಿ ನೆರೆದಿದ್ದ ಅಭಿಮಾನಿಗಳಿಗೆ ತಟ್ಟೆಇಡ್ಲಿ ವಿತರಿಸಲಾಯಿತು.