ತೆರೆ ಮೇಲೆ ವರ್ಕೌಟ್ ಆಯ್ತಾ ರಾಗಿಣಿ ದ್ವಿವೇದಿ, ಶರಣ್ ಕೆಮಿಸ್ಟ್ರಿ? - ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ
ಕನ್ನಡ ಚಿತ್ರರಂಗದಲ್ಲಿ ಅಧ್ಯಕ್ಷನಾಗಿ ಕಮಾಲ್ ಮಾಡಿದ ಕಾಮಿಡಿ ಕಿಂಗ್ ಶರಣ್ ಈಗ ಅಮೆರಿಕದಲ್ಲಿ ಅಧ್ಯಕ್ಷನಾಗಿ ಮಿಂಚಿದ್ದಾರೆ. ಶರಣ್ ಹಾಗು ರಾಗಿಣಿ ಅಭಿನಯದ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ರಾಜ್ಯಾದ್ಯಂತ ತೆರೆ ಕಂಡಿದೆ. ಫಸ್ಟ್ ಡೇ ಫಸ್ಟ್ ಶೋ ನೋಡಲು ಶರಣ್ ಹಾಗೂ ರಾಗಿಣಿ ಗಾಂಧಿನಗರದಲ್ಲಿರುವ ಅನುಪಮಾ ಥಿಯೇಟರ್ಗೆ ಬಂದಿದ್ದರು. ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಕೂಡಾ 'ಅಧ್ಯಕ್ಷ ಇನ್ ಅಮೆರಿಕ' ಸಿನಿಮಾ ನೋಡಲು ಬಂದಿದ್ದರು. ಸಿನಿಮಾ ನೋಡುವ ಸಮಯದಲ್ಲಿ ಏನಾಯ್ತು..? ರಾಗಿಣಿ ಹೈಟ್ ಬಗ್ಗೆ ಶರಣ್ ಹೇಳಿದ ವಿಷಯ ಏನು? ರಾಗಿಣಿಗೆ ಅಧ್ಯಕ್ಷ ಇನ್ ಅಮೆರಿಕ ಸಿನಿಮಾದ ಫಸ್ಟ್ ರಿವ್ಯೂ ಕೊಟ್ಟಿದ್ದು ಯಾರು ಇಂತಹ ಹಲವಾರು ಇಂತಹ ಹಲವಾರು ಆಸಕ್ತಿಕರ ವಿಷಯಗಳನ್ನು ಈಟಿವಿ ಭಾರತ್ ಜೊತೆ ಹಂಚಿಕೊಂಡಿದ್ದಾರೆ.