ಕೊರೊನಾ ನಮ್ಮನ್ನ "ಕಬ್ಜಾ" ಮಾಡೋಕು ಮುನ್ನ, ನಾವು ಎಚ್ಚರ ವಹಿಸೋಣ: ಇದು ಇವರ ಸಂದೇಶ - ಯಾರು ಮನೆಯಿಂದ ಹೊರ ಬರಬೇಡಿ
ಕೊರೊನಾ ನಮ್ಮನ್ನ "ಕಬ್ಜಾ" ಮಾಡೋಕು ಮುನ್ನಾ, ನಾವು ಎಚ್ಚರ ವಹಿಸೋಣ ಎಂದು ಕಬ್ಜ ಡೈರಕ್ಟರ್ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಯುಗಾದಿ ಹಬ್ಬವನ್ನು ಆಚರಿಸೋಣ, ನಾವೆಲ್ಲ ಸರ್ಕಾರದ ಆದೇಶವನ್ನು ಪಾಲಿಸೋಣ ಎಂದು ನಿರ್ದೇಶಕ, ನಿರ್ಮಾಪಕ ಆರ್. ಚಂದ್ರು ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಮೊದಲಿಗೆ ಸ್ಯಾನಿಟೈಸರ್ನಿಂದ ಎರಡು ಕೈಗಳನ್ನು ಸ್ವಚ್ಛ ಮಾಡಿಕೊಳ್ಳುವ ಮೂಲಕ ಹ್ಯಾಂಡ್ ವಾಶ್ ಯಾವ ರೀತಿ ಮಾಡಬೇಕು ಎಂಬುದನ್ನು ಜನರಿಗೆ ಡೈರೆಕ್ಷನ್ ಮಾಡಿದ್ದಾರೆ. ಕೊರೊನಾ ವಿರುದ್ಧ ಸಾಕಷ್ಟು ಜನ ಹಗಲು ರಾತ್ರಿ ಎನ್ನದೇ ಕಷ್ಟ ಪಡ್ತಿದ್ದಾರೆ. ನಾವೆಲ್ಲ ಸರ್ಕಾರದ ಆದೇಶ ಪಾಲಿಸೋಣ, ನಾವು ಬದುಕಿದ್ರೆ ಮುಂದಿನ ವರ್ಷ ಹಬ್ಬವನ್ನು ಆಚರಿಸಬಹುದು. ನಮ್ಮ ನಿಮ್ಮ ಆರೋಗ್ಯ ಈ ದೇಶದ ಶಕ್ತಿ ದಯವಿಟ್ಟು ಯಾರೂ ಮನೆಯಿಂದ ಹೊರ ಬರಬೇಡಿ.ಅಗತ್ಯ ವಸ್ತುಗಳು ಬೇಕಾದಾಗ ಮನೆಯಲ್ಲಿ ಯಾರಾದರೂ ಒಬ್ಬರು ಮಾಸ್ಕ್ ಧರಿಸಿ ಹೊರ ಹೋಗಿ, ಬಂದ ಮೇಲೆ ಮತ್ತೆ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಿ ಎಂದು ನಿರ್ದೇಶಕ ಆರ್. ಚಂದ್ರು ಜನರಿಗೆ ಸ್ವಚ್ಛತೆಯ ಪಾಠ ಮಾಡಿದ್ದಾರೆ.