ಪೀಣ್ಯದ ಸ್ಲಂ ನಿವಾಸಿಗಳ ಸಹಾಯಕ್ಕೆ ಬಂದ ದೀಪಿಕಾ ದಾಸ್ - 21ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್
21 ದಿನಗಳ ಕಾಲ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಆದರ ಎಫೆಕ್ಟ್ ದಿನಗೂಲಿ ಕೆಲಸಗಾರರಿಗೆ, ಸ್ಲಂ ನಿವಾಸಿಗಳಿಗೆ ತಟ್ಟಿದೆ. ಒಂದು ದಿನದ ಊಟಕ್ಕೆ ಪರದಾಡುವ ಸ್ಥಿತಿ ಉಂಟಾಗಿದೆ. ಇದೀಗ ನಟಿ ದೀಪಿಕಾ ದಾಸ್ ಸ್ಲಂ ನಿವಾಸಿಗಳ ಕಷ್ಟಕ್ಕೆ ಸಹಾಯ ಮಾಡ್ತಾ ಇದ್ದಾರೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ಕೊರೊನಾ ಪರಿಹಾರ ನಿಧಿಗೆ ಐದು ಲಕ್ಷ ರೂಪಾಯಿ ನೀಡಿರುವ ದೀಪಿಕಾ ದಾಸ್ ಈಗ ಪೀಣ್ಯದ ಕೆಲ ಸ್ಲಂ ನಿವಾಸಿಗಳಿಗೆ ದಿನಸಿ, ಧ್ಯಾನ ಹಾಗು ದಿನನಿತ್ಯದ ಉಪಯೋಗಿ ವಸ್ತುಗಳನ್ನ ನೀಡುತ್ತಿದ್ದಾರೆ. ಕೊರೊನಾದಿಂದಾಗಿ ಕಷ್ಟ ಪಡುತ್ತಿರುವ ಜನರಿಗೆ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಬೇಕು ಅನ್ನೋದು ದೀಪಿಕಾ ದಾಸ್ ಅಭಿಪ್ರಾಯ.