ಕನ್ನಡ ನೆಲದಲ್ಲಿನ ಮಾತೃ ಭಾಷೆ ತಾತ್ಸಾರಕ್ಕೆ ದರ್ಶನ್ ಬೇಸರ... ಕನ್ನಡ ಉಳಿವಿಗೆ ಹಂಬಲಿಸಿದ 'ದಾಸ' - Launching of India vs England movie
ಸಂಸದೆ/ ನಟಿ ಸುಮಲತಾ ಅಂಬರೀಶ್ ಅಭಿನಯದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದ ಲಾಂಚಿಂಗ್ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಂಡು, 'ಕನ್ನಡ ನೆಲದಲ್ಲಿ ಮಾತೃ ಭಾಷೆಯ ಬಗ್ಗೆ ತಾತ್ಸಾರ ಹುಟ್ಟುತ್ತಿದೆ. ಇತ್ತೀಚೆಗೆ ಮಕ್ಕಳಲ್ಲಿ ಕನ್ನಡ ಕುರಿತ ಜ್ಞಾನ ಕ್ಷೀಣಿಸುತ್ತಿದೆ' ಎಂದು ತನ್ನ ಮಗನನ್ನೇ ಉದಾಹರಣೆ ಕೊಟ್ಟು ಬೇಸರ ವ್ಯಕ್ತಪಡಿಸಿದರು. ಕನ್ನಡ ಉಳಿಯ ಬೇಕು ಬೆಳೆಯಬೇಕು. ನಾವೆಲ್ಲ ಅದಕ್ಕಾಗಿ ಶ್ರಮಿಸಬೇಕು. ಮಕ್ಕಳಲ್ಲಿ ಕನ್ನಡ ಪರ ಅಭಿಮಾನ, ಕನ್ನಡ ಜ್ಞಾನ ನಿರಂತರವಾಗಿ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.