ಕೊರೊನಾ ವಿರುದ್ಧ ಕರುಣೆಯ ಅಸ್ತ್ರ: ಬಡವರ ಹೊಟ್ಟೆ ತುಂಬಿಸ್ತಿರುವ ಗೋಲ್ಡನ್ ಸ್ಟಾರ್ ಫ್ಯಾನ್ಸ್.. - ನಟ ಗಣೇಶ್ ಅಭಿಮಾನಿಗಳ ಸಹಾಯ
ಕೊರೊನಾ ಭೀತಿಯಿಂದಾಗಿ ಇಡೀ ದೇಶವೇ ಲಾಕ್ಡೌನ್ ಆಗಿದೆ. ಕೂಲಿ ನಾಲಿ ಮಾಡಿ ಬದುಕು ನಡೆಸುತ್ತಿದ್ದ ಜನರಿಗೆ ಒಂದೊತ್ತಿನ ಕೂಳಿಗೂ ಪರದಾಟ. ಇದರಿಂದ ಹಸಿದ ಹೊಟ್ಟೆ ತುಂಬಿಸುವ ಕೆಲಸವನ್ನ ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಮಾಡ್ತಿದ್ದಾರೆ. ಅಖಿಲ ಕರ್ನಾಟಕ ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳು ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ. ಬಡವರಿಗೆ ನಿತ್ಯ ಸಾಮಾಗ್ರಿ ನೀಡುವುದರ ಜೊತೆ ಊಟದ ವ್ಯವಸ್ಥೆಯೂ ಮಾಡ್ತಿದ್ದಾರೆ. ಈಗಾಗ್ಲೇ ಬಡ ಸಿನಿಮಾ ಕಾರ್ಮಿಕರಿಗೆ ನಟ ಚೇತನ್, ನಿಖಿಲ್ ಕುಮಾರಸ್ವಾಮಿ ಹಣಕಾಸಿನ ನೆರವು ನೀಡಿ ಮಾನವೀಯತೆ ತೋರಿದ್ದಾರೆ.