'ಅರಸು' ಅನ್ನ ಸಂತರ್ಪಣೆ.. ಹತ್ತಾರು ಖಾದ್ಯಗಳು ಸಿದ್ಧ, 25 ಸಾವಿರ ಅಭಿಮಾನಿಗಳ ಆಗಮನ ನಿರೀಕ್ಷೆ - ಶಿವರಾಜ್ಕುಮಾರ್
ನಟ ಪುನೀತ್ ರಾಜ್ಕುಮಾರ್ ಅಗಲಿ ಇಂದಿಗೆ 12ದಿನ ಪೂರ್ಣಗೊಂಡ ಹಿನ್ನೆಲೆ ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯುತ್ತಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ನಿರೀಕ್ಷೆ ಇದ್ದು, ವಿವಿಧ ಖಾದ್ಯ ತಯಾರಾಗಿದೆ. ಎಲ್ಲಾ ಅಭಿಮಾನಿಗಳಿಗೂ ಬಾಳೆ ಊಟದ ವ್ಯವಸ್ಥೆ ಮಾಡಲಾಗಿದೆ. ನಾನ್ವೆಜ್ ಪ್ರಿಯರಿಗಾಗಿ ಘೀರೈಸ್, ಚಿಕನ್ ಚಾಪ್ಸ್, ಚಿಕನ್ ಕಬಾಬ್, ಕೋಳಿ ಮೊಟ್ಟೆ, ಅಕ್ಕಿಪೇಣಿ ಪಾಯಸ ಹಾಗೂ ಅನ್ನ ರಸಂ ಸಿದ್ಧಗೊಂಡಿದ್ದರೆ, ಸಸ್ಯಾಹಾರಿಗಳಿಗಾಗಿ ಘೀ ರೈಸ್ ಮತ್ತು ಕುರ್ಮ, ಆಲೂಗೆಡ್ಡೆ ಕಬಾಬ್, ಬೇಬಿ ಕಾರ್ನ್ ಲಾಲಿ ಪಾಪ್, ಪಾಯಸ, ಮಸಾಲೆ ವಡೆ ತಯಾರಾಗಿವೆ.