ರಾಷ್ಟ್ರ ಪ್ರಶಸ್ತಿ ವಿಜೇತ ಸಾಗರ್ ಪುರಾಣಿಕ್ ಜೊತೆ ಒಂದಷ್ಟು ಮಾತುಕತೆ - ಮಹಾನ್ ಹುತಾತ್ಮ
ಸುನಿಲ್ ಪುರಾಣಿಕ್ ಎಂದರೆ ತಕ್ಷಣ ನಮಗೆ ನೆನಪಾಗುವುದು ಕಿರುತೆರೆ ಧಾರಾವಾಹಿಗಳು. ನಟನೆ ಜೊತೆ ಸಾಕಷ್ಟು ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಕಂಡಿರುವ ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ಕೂಡಾ ಇದೀಗ ತಂದೆ ಹಾದಿಯಲ್ಲಿ ಸಾಗಿದ್ದಾರೆ. 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ಸಾಗರ್ ಪುರಾಣಿಕ್ ನಿರ್ದೇಶನದ ಕಿರುಚಿತ್ರ ಕೂಡಾ ಇದೆ. 'ಮಹಾನ್ ಹುತಾತ್ಮ' ಎಂಬ ಕಿರುಚಿತ್ರವನ್ನು ಸಾಗರ್ ನಿರ್ದೇಶಿಸಿ ನಟನೆ ಕೂಡಾ ಮಾಡಿದ್ದಾರೆ. ಸ್ಯಾಂಡಲ್ವುಡ್ ಇತಿಹಾಸಲ್ಲಿ ಇದೇ ಮೊದಲ ಬಾರಿಗೆ ಕಿರುಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಸಾಗರ್ ಪುರಾಣಿಕ್ ತಮ್ಮ ಸಿನಿ ಜರ್ನಿ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ.