ಬಿಗ್ಬಾಸ್ನಲ್ಲಿ ಬಾಸ್ ಆದವ... 'ಚಂದನ' ಗೊಂಬೆ ನಿವೇದಿತಾಳಿಗೆ ಫಿದಾ.. ಈಗ ಇಬ್ಬರ ನಿಶ್ಚಿತಾರ್ಥ - ಉಂಗುರ ಬದಲಿಸಿಕೊಂಡ ಚಂದನ್ ಶೆಟ್ಟಿ, ನಿವೇದಿತಾ ಗೌಡ
ಬಿಗ್ಬಾಸ್ ಸೀಸನ್ 6 ರಲ್ಲಿ ರ್‍ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡ ಬಗ್ಗೆ 'ಗೊಂಬೆ ಗೊಂಬೆ' ಹಾಡು ಹೇಳುತ್ತಿದ್ದಾಗ ಇವರಿಬ್ಬರ ಸಂಬಂಧ ನಿಶ್ಚಿತಾರ್ಥದವರೆಗೆ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇವರಿಬ್ಬರ ಅಭಿಮಾನಿಗಳು ಹಾಗೂ ರಾಜ್ಯದ ಜನತೆಗೆ ಇದು ನಿಜಕ್ಕೂ ಆಶ್ಚರ್ಯದ ವಿಷಯ ಎನ್ನಬಹುದು. ದಸರಾ ವೇದಿಕೆ ಮೇಲೆ ಲವ್ ಪ್ರಪೋಸ್ ಮಾಡಿಕೊಂಡಿದ್ದ ಈ ಜೋಡಿ ಇಂದು ಉಂಗುರ ಬದಲಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮಿಬ್ಬರ ಫ್ರೆಂಡ್ಶಿಪ್, ನಿಶ್ಚಿತಾರ್ಥ, ಮದುವೆ ಬಗ್ಗೆ ಈ ಲವ್ ಬರ್ಡ್ಸ್ ಈ ಟಿವಿ ಭಾರತದ ಜೊತೆ ಮಾತನಾಡಿದ್ದಾರೆ.