'ರಾಜಕುಮಾರ'ನ ಹುಟ್ಟುಹಬ್ಬಕ್ಕೆರಾಜಕಾರಣಿಗಳಿಂದ ಶುಭಾಶಯಗಳ ಸುರಿಮಳೆ... - ಶಾಸಕ ಅರವಿಂದ ಲಿಂಬಾವಳಿ
ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು 45ನೇ ವಸಂತಕ್ಕೆ ಕಾಲಿಡಲಿದ್ದು, ದೊಡ್ಮನೆ ಹುಡುಗನಿಗೆ ರಾಜ್ಯ ರಾಜಕೀಯ ನಾಯಕರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಉಪಮುಖ್ಯಮಂತ್ರಿ ಲಕ್ಷಣ್ ಸವದಿ, ಸಚಿವ ಸಿ.ಟಿ.ರವಿ, ಶಾಸಕ ಅರವಿಂದ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ, ಶಾಸಕ ಸಾ.ರಾ.ಮಹೇಶ್, ಶಾಸಕ ರಾಜುಗೌಡ, ಮಾಜಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ.