ಕರ್ನಾಟಕ

karnataka

ETV Bharat / videos

ದೀಪ ಬೆಳಗೋ ಬಗ್ಗೆ ಬಿಗ್​​ಬಾಸ್ ವಿನ್ನರ್​​​ ಶಶಿ ಹೇಳಿದ್ದೇನು? - ಬಿಗ್​ಬಾಸ್​ ಶಶಿ ಲೇಟೆಸ್ಟ್​​ ನ್ಯೂಸ್​​

By

Published : Apr 5, 2020, 4:28 PM IST

ಕೊರೊನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿ ನೀಡಿದ ಕರೆಗೆ ಎಲ್ಲೆಡೆ ಬೆಂಬಲ ವ್ಯಕ್ತವಾಗ್ತಿದೆ. ಸೆಲೆಬ್ರಿಟಿಗಳೂ ತಮ್ಮ ತಮ್ಮ ಅಭಿಮಾನಿಗಳಿಗೆ ಜಾಗೃತಿಯ ಮಾತುಗಳ ಮೂಲಕ ಹುರಿದುಂಬಿಸ್ತಿದ್ದಾರೆ. ಇಂದು ರಾತ್ರಿ 9ಕ್ಕೆ ಮನೆಯಲ್ಲಿ ಲೈಟ್ ಆಫ್ ಮಾಡಿ ದೀಪ ಬೆಳಗಿಸಿ ಅಂತಾ ಪ್ರಧಾನಿ ಕರೆ ಕೊಟ್ಟಿರುವುದು ಗೊತ್ತೇ ಇದೆ. ಈ ಬಗ್ಗೆ ಬಿಗ್‌ಬಾಸ್ ವಿನ್ನರ್ ಶಶಿ ವಿಡಿಯೋವೊಂದನ್ನ ಮಾಡಿದ್ದಾರೆ. ಪ್ರಧಾನಿಯವರು ರಾತ್ರಿ 9ಕ್ಕೆ ಲೈಟ್ಸ್ ಆಫ್ ಮಾಡಿ 9 ನಿಮಿಷ ದೀಪ ಬೆಳಗಿಸಿ ಅಂದಿದ್ದಾರೆ. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗೋಣ, ನಾವು ನಮ್ಮ ಫಾರ್ಮ್‌ಹೌಸ್‌ನಲ್ಲಿ ದೀಪ ಬೆಳಗಿಸ್ತೇವೆ. ಎಲ್ಲರೂ ನಿಮ್ಮ ನಿಮ್ಮ ಮನೆಯಲ್ಲಿ ಲೈಟ್ಸ್ ಆರಿಸಿ ದೀಪ ಹಚ್ಚಿ ಅಂತಾ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

...view details