ಫೆಬ್ರವರಿ 28ಕ್ಕೆ ರಿಲೀಸ್ ಆಗಲಿರುವ ಬಿಚ್ಚುಗತ್ತಿ - ಬಿಚ್ಚುಗತ್ತಿ ಚಿತ್ರ
ನಿರ್ದೇಶಕ ಹರಿ ಸಂತು ನಿರ್ದೇಶನದ ಚಿತ್ರದುರ್ಗದ ಪಾಳೆಗಾರ ಭರಮಣ್ಣನ ಕುರಿತಾದ ಬಿಚ್ಚುಗತ್ತಿ ಚಿತ್ರದ ಟ್ರೈಲರ್ ಶನಿವಾರ ಬಿಡುಗಡೆಯಾಗಿದೆ. ಚಿತ್ರದಲ್ಲಿ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿ ಭರಮಣ್ಣ ಪಾತ್ರದಲ್ಲಿ ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ಕಾಣಿಸಿದ್ದು, ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ನಿರ್ಮಾಪಕರು, ನಿರ್ದೇಶಕರು ಹಾಗೂ ನಟ ಡಾಲಿ ಧನಂಜಯ್ ಆಗಮಿಸಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.