ಸಾಂಸ್ಕೃತಿಕ ನಗರಿಗೆ ಬಂದ ನಾರಾಯಣನ ಯಾತ್ರೆ: ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ರಕ್ಷಿತ್ ಧನ್ಯವಾದ - ಪ್ಯಾನ್ ಇಂಡಿಯಾ ಸಿನಿಮಾ ಅವನೇ ಶ್ರೀಮನ್ನಾರಾಯಣ
ಮೈಸೂರು: ಅವನೇ ಶ್ರೀಮನ್ನಾರಾಯಣ ಚಿತ್ರತಂಡದ 'ನಾರಾಯಣನ ಯಾತ್ರೆ' ಇಂದು ಮೈಸೂರಿನ ಚಿತ್ರಮಂದಿರಗಳಿಗೆ ಆಗಮಿಸಿತು. ನಗರದಲ್ಲಿ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ನಟ ರಕ್ಷಿತ್ ಶೆಟ್ಟಿ ಹಾಗೂ ನಟಿ ಶಾನ್ವಿ ಶ್ರೀವಾತ್ಸವ್ ಹಾಗೂ ಚಿತ್ರತಂಡದ ಸದಸ್ಯರು ಡಿಆರ್ಸಿ, ಗಾಯಿತ್ರಿ ಹಾಗೂ ಸರಸ್ವತಿ ಚಿತ್ರಮಂದಿರಗಳಿಗೆ ಭೇಟಿ ನೀಡಿದರು. ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರೊಂದಿಗೆ ಮಾತುಕತೆ ನಡೆಸಿ, ಕೆಲಸದ ದಿನಗಳಲ್ಲೂ ಸಿನಿಮಾ ನೋಡಲು ಬಂದಿದ್ದೀರಿ, ಸಂತೋಷ ಎಂದು ರಕ್ಷಿತ್ ಶೆಟ್ಟಿ ಧನ್ಯವಾದ ಹೇಳಿದರು.