ಕೊರೊನಾ ತಡೆಯಲು ಅನಿರುದ್ಧ್ ಆರೋಗ್ಯ ಸಲಹೆ - ಜೊತೆಜೊತೆಯಲಿ ಅನಿರುದ್ಧ್
ವಿಶ್ವದೆಲ್ಲೆಡೆ ಕೊರೊನಾ ವೈರಸ್ಗೆ ಬಲಿಯಾದವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇಂದು ಕರ್ನಾಟಕದಲ್ಲಿ ಒಬ್ಬ ವೃದ್ಧ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದು, ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಇದೀಗ ಕಿರುತೆರೆಯಲ್ಲಿ ಜನ ಮನ್ನಣೆಗಳಿಸಿರುವ ಅನಿರುದ್ಧ್ ಕೊರೊನಾ ವೈರಸ್ ಬಗ್ಗೆ ಮಾತನಾಡಿದ್ದಾರೆ. ಕೊರೊನಾ ವೈರಸ್ ಬಗ್ಗೆ ಯಾರು ಭಯ ಪಡಬೇಕಾಗಿಲ್ಲ, ಕೆಮ್ಮು, ಜ್ವರ ಬಂದಾಗ ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ. ಬಿಸಿ ನೀರು ಕುಡಿಯಬೇಕು, ಆಗಾಗ ಕೈ ತೊಳೆಯುತ್ತಾ ಇರೀ ಎಂದು ಅನಿರುದ್ಧ್ ಆರೋಗ್ಯ ಸಲಹೆ ನೀಡಿದ್ದಾರೆ.