ಮದುವೆ ನಂತರ ಸಾಲು ಸಾಲು ಚಿತ್ರಗಳಲ್ಲಿ ಐಂದ್ರಿತಾ... - ಐಂದ್ರಿತಾ ಗರುಡ
ಬಟ್ಟಲು ಕಣ್ಗಳ ಚೆಲುವೆ, ಬೆಂಗಾಲಿ ಬೆಡಗಿ ನಟಿ ಐಂದ್ರಿತಾ ರೇ ಮದುವೆ ಆದ ನಂತರ ಎಲ್ಲೋದರಪ್ಪ ಅಂತ ಅವರ ಫ್ಯಾನ್ಸ್ ಕೇಳೋತರ ಆಗಿತ್ತು. ಇಂಡಸ್ಟ್ರಿಯಿಂದ ಸುಮಾರು ಎಂಟು ವರ್ಷಗಳ ಗ್ಯಾಪ್ ನಂತರ ಯಾರಿಗೆ ಆದರೂ ಒಂದು ಹೊಸ ಟ್ರ್ಯಾಕ್ ಆರಂಭಿಸುವ ಯೋಚನೆ ಬರುತ್ತೆ. ಅದೇ ರೀತಿ ನಾನು ಒಂದು ಸ್ಮಾಲ್ ಗ್ಯಾಪ್ ತೆಗೆದುಕೊಂಡಿದ್ದೆ. ಆದರೆ ಈ ಗ್ಯಾಪ್ನಲ್ಲಿ ನಾನು ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಚಿತ್ರಗಳಲ್ಲಿ ಬ್ಯುಸಿ ಆಗಿದ್ದೆ. ಈಗ ಹಿಂದಿಯ ಎರಡು ಚಿತ್ರಗಳು ಕಂಪ್ಲೀಟ್ ಆಗಿದ್ದು. ಅದರಲ್ಲಿ ಒಂದು ಸಿನಿಮಾ ಬಿಡುಗಡೆಯಾಗಿದೆ. ಮತ್ತೊಂದು ಸಿನಿಮಾ ಶೂಟಿಂಗ್ ಕಂಪ್ಲೀಟ್ ಆಗಿದ್ದು, ರಿಲೀಸ್ ಹಂತದಲ್ಲಿದೆ. ಅಲ್ಲದೆ ಈಗ ಗರುಡ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಇದರ ಜೊತೆಗ ಮತ್ತೆ ಎರಡು ಹೊಸ ಕನ್ನಡ ಚಿತ್ರಗಳಿಗೆ ಕಮಿಟ್ ಆಗಿದ್ದು, ಶೀಘ್ರದಲ್ಲಿ ಅನೌನ್ಸ್ ಮಾಡುವುದಾಗಿ ತಿಳಿಸಿದರು.