ನಟಿಸಲು ಅವಕಾಶ ಸಿಗುತ್ತಿಲ್ಲವೇ ಎಂದಿದ್ದಕ್ಕೆ ನಟಿ ಪ್ರೇಮಾ ಹೇಳಿದ್ದೇನು ಗೊತ್ತೆ? - ನಟಿ ಪ್ರೇಮಾ
ಹುಬ್ಬಳ್ಳಿ: ನಾನು ಚಿತ್ರರಂಗದಿಂದ ದೂರ ಉಳಿಯುವ ಮಾತೇ ಇಲ್ಲ. ಆದರೆ ಇಷ್ಟವಾಗುವ ಪಾತ್ರ ಸಿಕ್ಕಿಲ್ಲ. ಮುಂದೆ ಸಿಕ್ಕರೆ ಖಂಡಿತ ನಟನೆಯಿಂದ ದೂರ ಸರಿಯುವುದಿಲ್ಲ ಎಂದು ನಟಿ ಪ್ರೇಮಾ ಹೇಳಿದ್ದಾರೆ. ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿಯ ಖಾಸಗಿ ಕಾಲೇಜು ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲ. ಪೋಷಕ ನಟಿಯಾದ್ರೂ ಸರಿ, ಅವಕಾಶ ಸಿಕ್ಕರೆ ನಟಿಸುವೆ ಎಂದರು.